Discovery House Distributors Pvt Ltd
Our Daily Bread Kannada Annual Edition 2027
Our Daily Bread Kannada Annual Edition 2027
Couldn't load pickup availability
ಬಹುತೇಕ ಅನಿಶ್ಚಿತತೆ ಮತ್ತು ಗೊಂದಲಮಯವಾಗಿರುವ ಈ ಲೋಕದಲ್ಲಿ, “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ” (ಕೀರ್ತನೆ 119:105) ಎಂದು ತನ್ನ ಕರ್ತನಿಗೆ ಹೇಳಿದ ಕೀರ್ತನೆಗಾರನ ಮಾತುಗಳಲ್ಲಿ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಕಂಡುಕೊಳ್ಳಿರಿ.
2027ರ ಈ ವಾರ್ಷಿಕ ಆವೃತ್ತಿಯು 366 ನೀತಿಬೋಧನಾ ಕಥೆಗಳು, ಉತ್ತೇಜನ ನೀಡುವ ಉಲ್ಲೇಖಗಳು ಹಾಗೂ ಮುಖ್ಯವಾಗಿ ದೇವರ ವಾಕ್ಯದ ಮೂಲಕ ನಿಮ್ಮ ಜೀವನದ ಪ್ರತಿದಿನವನ್ನು ದೇವರ ವಾಕ್ಯದ ಬೆಳಕಿನಲ್ಲಿ ಕಾಣುವಂತೆ ಪ್ರೋತ್ಸಾಹಿಸುತ್ತದೆ ಮತ್ತು ಪ್ರೇರೇಪಿಸುತ್ತದೆ.
ನೀವು ಎಷ್ಟೇ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಅಥವಾ ನಿಮ್ಮ ಮುಂದಿನ ದಾರಿ ಎಷ್ಟೇ ಕಠಿಣವಾಗಿ ಕಾಣುತ್ತಿದ್ದರೂ, “ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವವನು” (ಕೀರ್ತನೆ 18:28) ಆದ ಕರ್ತನೊಂದಿಗೆ ಪ್ರತಿಯೊಂದು ಹೆಜ್ಜೆಯನ್ನೂ ಇಟ್ಟು ಭರವಸೆಯಿಂದ ಮುಂದುವರಿಯಿರಿ.
ನಮ್ಮ ಅನುದಿನದ ಆಹಾರದ ಬಗ್ಗೆ
ನಮ್ಮ ಅನುದಿನದ ಆಹಾರ ವಿಶ್ವದಾದ್ಯಂತ ವಿತರಿಸಲ್ಪಡುತ್ತಿದ್ದು, 50ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ. ಪ್ರತಿ ತಿಂಗಳು ಲಕ್ಷಾಂತರ ಓದುಗರು ಪ್ರೇರಣೆ, ಸಾಂತ್ವನ, ಶಾಂತಿ, ಸಮಾಧಾನ ಮತ್ತು ಭರವಸೆಯನ್ನು ಪಡೆಯಲು ಈ ಪ್ರಿಯ ಭಕ್ತಿಪಾಠದ ಪುಟಗಳನ್ನು ಓದುತ್ತಾರೆ.
ಹೆಚ್ಚಿನ ಮಾಹಿತಿಗಾಗಿ odbm.org ಗೆ ಭೇಟಿ ನೀಡಿ.
ನಮ್ಮ ಆನ್ಲೈನ್ ಮಳಿಗೆಯಾದ www.dhdindia.in ಗೆ ಸಹ ಭೇಟಿ ನೀಡಿ.
Share
